ಕಾರವಾರ: ಅಧಿಕಾರಿಗಳ ಗೊಂದಲದಿಂದ ಬಾಂದಿ ಸಮಾಜ ತೊಂದರೆಯಲ್ಲಿ:ನಗರದಲ್ಲಿ ಜಿಲ್ಲಾ ಬಾಂದಿ ಸಮಾಜೋನ್ನತಿ ಸಂಘದ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ್
ಬುಧವಾರ ಮಧ್ಯಾಹ್ನ 2ಕ್ಕೆ ಪತ್ರಿಕಾಗೋಷ್ಠಿ ನಡೆಸಿದ ಕೃಷ್ಣಾನಂದ ಬಾಂದೇಕರ್ ಅಧಿಕಾರಿಗಳ ಗೊಂದಲದಿಂದಾಗಿ 'ಬಾಂದಿ' ಸಮುದಾಯದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜಾತಿ ಗಣತಿ ಸೇರಿದಂತೆ ದಾಖಲೆಗಳಲ್ಲಿ ತಮ್ಮ ಜಾತಿಯನ್ನು 'ಬಾಂದಿ' ಎಂದು ನಮೂದಿಸುವಂತೆ ಕಾರವಾರದಲ್ಲಿ ಕರೆ ನೀಡಿದ ಸಮುದಾಯದ ಮುಖಂಡರು, 'ಬಂಡಿ', 'ಬಂಧಿ' ಎಂಬ ತಪ್ಪು ಪದಗಳ ಬಳಕೆಯಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮ ಜಾತಿಯನ್ನು 'ಬಾಂದಿ' ಎಂದು ದಾಖಲಿಸಬೇಕು ಒತ್ತಾಯಿಸಿದ್ದಾರೆ.