ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಅವರು ಮಾತನಾಡುತ್ತಾ , ನವೆಂಬರ್ ಕ್ರಾಂತಿ ವಿಚಾರವಾಗಿ ಪ್ರತಿಕ್ರಿಯಿಸಿ ನಮ್ಮಲ್ಲಿ ಯಾವುದೇ ಕ್ರಾಂತಿಯೂ ಇಲ್ಲಾ ಭ್ರಾಂತಿಯೂ ಇಲ್ಲಾ ಕಳೆದ ಆರು ತಿಂಗಳಿಂದ ಈ ಚರ್ಚೆ ನಡೆಯುತ್ತಿದೆ. ಇದರ ಹಿಂದೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲಾ. ಯಾವ ಸಚಿವರು ಅವರ ಸ್ಥಾನಕ್ಕೆ ಬಡಿದಾಡುತ್ತಿಲ್ಲ . ಮುಖ್ಯಮಂತ್ರಿಗಳು ವರಿಷ್ಠರು ಸಮಾಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರ ನಿರ್ಧಾರಕ್ಕೆ ಎಲ್ಲರ ಸಹಮತ ಇದೆ ಎಂದರು.