ಚನ್ನಪಟ್ಟಣ: ಸರ್ಕಾರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೆರವಿಗೆ ದಾವಿಸಬೇಕಿದೆ. ನಗರದಲ್ಲಿ ಗೋವಿಂದಹಳ್ಳಿ ನಾಗರಾಜ್ ಹೇಳಿಕೆ.
ಚನ್ನಪಟ್ಟಣ -- ಕೃಷಿ ಸಹಕಾರ ಬ್ಯಾಂಕ್ ನಿಂದ ಹೊಸದಾಗಿ ನೀಡುತ್ತಿರುವ ಸಾಲ ಮರು ಪಾವತಿಯಾಗುತ್ತಿದೆ ಅದರೆ ಹಿಂದೆ ನೀಡಿದ್ದ ಸಾಲಗಳು ಮರುಪಾವತಿಯಾಗಿಲ್ಲ ಹಾಗಾಗಿ ಸರ್ಕಾರ ಪಿ.ಎಲ್.ಡಿ ಬ್ಯಾಂಕ್ ನೆರವಿಗೆ ದಾವಿಸಿದರೆ ಸಹಕಾರ ಬ್ಯಾಂಕ್ ಉಳಿಯುತ್ತವೆ ಎಂದು ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜ್ ತಿಳಿಸಿದರು. ನಗರದ ಶತಮಾನೋತ್ಸವ ಭವನದಲ್ಲಿ ಭಾನುವಾರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ 2024 -24 ಸಾಲಿನ 85 ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಯಶಸ್ವಿಯಾಗಿ ಜರುಗಿತು.