ಚಿತ್ತಾಪುರ: ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನ ಹಿನ್ನಲೆ: ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಬಿಗಿ ಭದ್ರತೆ
ಕಲಬುರಗಿ : ಚಿತ್ತಾಪುರ ಪಟ್ಟಣದಲ್ಲಿಂದು ಆರ್ಎಸ್ಎಸ್ ಪಥಸಂಚಲನ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಭಾರಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.. ಅ19 ರಂದು ಬೆಳಗ್ಗೆ 8 ಗಂಟೆಯಿಂದಲೇ ಜಿಲ್ಲಾ ಪೊಲೀಸರು ಭಾರಿ ಬಂದೋಬಸ್ತ್ ಕಲ್ಪಿಸಿದ್ದಾರೆ.. ಇನ್ನೂ ಇಂದು ಆರ್ಎಸ್ಎಸ್ ಪಥಸಂಚಲನ ನಡೆಸಲಿದ್ದು, ಆರ್ಎಸ್ಎಸ್ ಪಥಸಂಚಲನಕ್ಕೆ ಚಿತ್ತಾಪುರ ತಹಶಿಲ್ದಾರ್ ಅನುಮತಿ ನೀಡಿಲ್ಲ.. ಹೀಗಾಗಿ ಆರ್ಎಸ್ಎಸ್ ಹೈಕೋರ್ಟ್ ಮೆಟ್ಟಿಲೇರಿದ್ದು, ವರ್ಚುವಲ್ ಮೂಲಕ ಅರ್ಜಿ ವಿಚಾರಣೆ ನಡೆಸಲಾಗ್ತಿದೆ..