ಸಾಗರ: ಎರಡು ಕಳ್ಳತನದ ಆರೋಪಿ ಬಂಧಿಸಿದ ಸಾಗರ ಪೊಲೀಸರು, 44 ಗ್ರಾಂ ತೂಕದ ಚಿನ್ನಾಭರಣ ವಶ
Sagar, Shimoga | Nov 5, 2025 ಸಾಗರ ಪೇಟೆ ಪೊಲೀಸರು ಎರಡು ಪ್ರಕರಣದ ಕಳ್ಳರನ್ನ ಬಂಧಿಸುವಲ್ಲಿ ಬುಧವಾರ ರಾತ್ರಿ 8 ಗಂಟೆಗೆ ಯಶಸ್ವಿಯಾಗಿದ್ದಾರೆ. ಸಾಗರ ನಗರದ ವಸಂತ ಲಕ್ಷ್ಮಿ ಹಾಗೂ ನಯನ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಸಾಗರದ ದರ್ಶನ್, ಅಶೋಕ ಹಾಗೂ ಭದ್ರಾವತಿ ಯ ಹನುಮಂತ ನಗರ ನಿವಾಸಿ ಶಾಂತಿ ಬಂಧಿತ ಆರೋಪಿಗಳು. ಬಂಧಿತರಿಂದ 44 ಗ್ರಾಂ ತೂಕದ ಚಿನ್ನಾಭರಣವನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಸಾಗರ ಎಎಸ್ಪಿ ಬೆನಕಪ್ರಸಾದ್ ತಿಳಿಸಿದ್ದಾರೆ.