ಬೆಂಗಳೂರು ಉತ್ತರ: ಪಾಕ್ಗೆ ತಕ್ಕ ಉತ್ತರ ಕೊಡಬೇಕು, ಇದು ಸಾಕಾಗಲ್ಲ: ನಗರದಲ್ಲಿ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್
ಪಾಕಿಸ್ತಾನದ ಮೇಲೆ ' ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಯ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ. ಇಷ್ಟು ಕ್ರಮ ಸಾಲುವುದಿಲ್ಲ. ಶತ್ರುಗಳಿಗೆ ಸರಿಯಾದ ಉತ್ತರ ಕೊಡಬೇಕಾಗಿದೆ ಎಂದು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.. ಬೆಂಗಳೂರಿನಲ್ಲಿ ಇವತ್ತು ಅಂದರೆ ಮೇ 7ರಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೇಶ ಸಂಕಷ್ಟಕ್ಕೆ ಸಿಕ್ಕಿದ್ದಾಗ ಹೋರಾಟ ಮಾಡಿರೋದು ಜಗತ್ತಿಗೆ ಗೊತ್ತಿದೆ. ಸೇನಾಧಿಕಾರಿಗಳಿಗೆ ಅಧಿಕಾರ ಕೊಟ್ಟ ನಂತರ ಪಾಕಿಸ್ತಾನದ ಹಲವೆಡೆ ಸ್ಟ್ರೈಕ್ ಮಾಡಿದ್ದಾರೆ.. ನಾವೆಲ್ಲ ಒಗ್ಗಟ್ಟಿಂದ ದೇಶದ ಜೊತೆ ನಿಲ್ಲಬೇಕು. ಪಾಕಿಸ್ತಾನಕ್ಕೆ ಸರಿಯಾದ ಉತ್ತರ ಕೊಡಬೇಕು. ಇಷ್ಟಕ್ಕೆ ಇದು ಸಾಲುವುದಿಲ್ಲ ಎಂದರು..