ಚಿಟಗುಪ್ಪ: ತಾಳ್ಮಡಗಿಯಲ್ಲಿ ಜೂಜು ಆರೋಪಿತರಿಂದ ₹ 14,120 ಜಪ್ತಿ
ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಮನ್ನಾಎಖೆಳ್ಳಿ ಪೊಲೀಸರು ತಾಲೂಕಿನ ತಾಳ್ಮಡ್ಗಿಯಲ್ಲಿ 6ಜನರನ್ನ ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ನಿರ್ದೇಶನದ ಮೇರೆಗೆ ಖಚಿತ ಮಾಹಿತಿ ಆದರಿಸಿ ದಾಳಿ ನಡೆಸಿರುವ ಮನೆ ಕೇಳಿ ಪಿಎಸ್ಐ ಮಹೇಂದ್ರಕುಮಾರ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿತರಿಂದ ₹14,120 ಜಪ್ತಿ ಮಾಡಿಕೊಂಡು ಮನ್ನಾಎ ಖೆಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಕುರಿತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ಗುರುವಾರ ಮಧ್ಯಾಹ್ನ 2ಕ್ಕೆ ತಿಳಿಸಲಾಗಿದೆ.