ಚಿತ್ರದುರ್ಗ: ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿಯಲ್ಲಿ ಆಯುಧ ಪೂಜೆ
ಚಿತ್ರದುರ್ಗದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿಯಲ್ಲಿ ಆಯುಧ ಪೂಜೆಯನ್ನ ಹಮ್ಮಿಕೊಳ್ಳಲಾಗಿತ್ತು. ಬುದವಾರ ಬೆಳಗ್ಗೆ 11.30 ಕ್ಕೆ ಆಯುಧ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಹಿನ್ನೆಲೆ ಇಲಾಖೆಯ ಶಸ್ತ್ರಾಸ್ತ್ರಗಳಿಗೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ಪೂಜೆ ಸಲ್ಲಿಸಿ ದೇವರಿಗೆ ಪೂಜೆ ಸಲ್ಲಿಸಿ ಕಚೇರಿ ಆವರಣದಲ್ಲಿ ಅಂಬು ಕಡಿದು ವಾಹನಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಯುಧ ಪೂಜೆಯನ್ನ ನರವೇರಿಸಿದ್ದು ಎಲ್ಲರಿಗೂ ಆಯುಧ ಪೂಜೆಯ ಶುಭಾಶಯಗಳನ್ನ ತಿಳಿಸಿದ್ದಾರೆ