ದೇವನಹಳ್ಳಿ : ಹೊಸಕೋಟೆ ಅಬಕಾರಿ ಸಬ್ ಇನ್ಸ್ ಪೇಕ್ಟರ್ ಹನುಮಂತರಾಜು.ಎನ್.ಎಂ ಮತ್ತು ತಂಡ ದಾಳಿ ನಡೆಸಿದ್ದು, ಸುಮಾರು 5 ಲಕ್ಷ ಮೌಲ್ಯದ 6.288 ಕೆ.ಜಿ ಒಣ ಗಾಂಜಾ ಜಪ್ತಿ ಮಾಡಿದ್ದಾರೆ. ಹೊಸಕೋಟೆ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಚಂದ್ರ ಮೋಹನ್.ಕೆ. ಎನ್ ಮಾರ್ಗ ದರ್ಶನದಲ್ಲಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಹನುಮಂತರಾಜು.ಎನ್.ಎಂ ಮತ್ತು ತಂಡ ಕಾರ್ಯಚರಣೆ ನಡೆಸಿತ್ತು. ದೇವನಹಳ್ಳಿ ತಾಲ್ಲೂಕಿನ ಟಿಪ್ಪು ಸರ್ಕಲ್ ಬಳಿ ಗಸ್ತು ನಡೆಸುತ್ತಿದ್ದಾಗ ಬಂದ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ದೇವನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಅಂದಾಜು 5ಲಕ್ಷದ ಮೌಲ್ಯದ ಒಟ್ಟು 6.