ಗ್ರಾಮಪಂಚಾಯಿತಿ ಕಟ್ಟಡ ಗ್ರಾಮಕ್ಕೆ ಕಳಶ ವಿದ್ದಂತೆ : ಎಮ್ಮೆ ನತ್ತ ಗ್ರಾಮದಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ಎಮ್ಮೆನತ್ತ ಗ್ರಾಮಪಂಚಾಯಿತಿ ಕಾರ್ಯಾಲಯ ಉದ್ಘಾಟನೆ ಮತ್ತು ಅಂಗನವಾಡಿ ಕಟ್ಟಡ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಭಾನುವಾರ ಮಧ್ಯಾಹ್ನ 1 ಗಂಟೆಯಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ವೇಳೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಸಮೃದ್ಧಿ ಮಂಜುನಾಥ್ ಗ್ರಾಮಗಳಲ್ಲಿ ಅತೀ ಮುಖ್ಯವಾಗಿ ಪಂಚಾಯಿತಿ ಮುಖ್ಯವಾದ ಕಟ್ಟಡ ಇಲ್ಲಿಂದಲೇ ಗ್ರಾಮಗಳ ಅಭಿರುದ್ಧಿಗೆ ಎಲ್ಲ ರೀತಿಯ ರೂಪರೆಶಗಳು ಮೂಡಲು ಸಾಧ್ಯ ಎಂದು ತಿಳಿಸಿದ್ದಾರೆ