ಬಂಗಾರಪೇಟೆ: ಕೇಂದ್ರ ಸರಕಾರ ಕೆಲ ಸರಕು ಮತ್ತು ಸೇವಾ ತೆರಿಗೆ ದರ ಇಳಿಕೆ ಮಾಡಿದ್ದನ್ನು ಸ್ವಾಗತಿಸಿ ಬಿಜೆಪಿ ವತಿಯಿಂದ ಪಟ್ಟಣದಲ್ಲಿ ಸಂಭ್ರಮ ಆಚರಣೆ
ಪಟ್ಟಣದ ವೃತ್ತದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ ಜಿಎಸ್ಟಿ ಇಳಿಕೆಗೆ ಉಡುಗೊರೆ ಮೋದಿ ಸರಕಾರಕ್ಕೆ ಧನ್ಯವಾದಗಳು ಘೋಷ ವಾಕ್ಯದ ಅಡಿಯಲ್ಲಿ ಬಜಾರ್ ರಸ್ತೆಯ ಎಲ್ಲಾ ಅಂಗಡಿಗಳ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.ಈ ವೇಳೆ ಸೋಮವಾರ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿವಿ ಮಹೇಶ್ ಮಾತನಾಡಿ, ಕೇಂದ್ರ ಸರಕಾರ ಜಿಎಸ್ ಟಿ ಇಳಿಕೆ ಮಾಡಿ ಜನರಿಗೆ ನವರಾತ್ರಿ ಉಡುಗೊರೆ ನೀಡಿದೆ. ದೇಶದ ಇತಿಹಾಸದಲ್ಲಿ ಜಿಎಸ್ ಟಿ ಏರಿಸಿದ್ದನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಇಳಿಸಿದ ಉದಾಹರಣೆ ಇಲ್ಲ. ನರೇಂದ್ರ ಮೋದಿಯವರು ಈ ಕೆಲಸ ಮಾಡಿ ಬಡ, ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.