ದಾಂಡೇಲಿ: ದಾಂಡೇಲಿ - ಅಳ್ನಾವರ ಪ್ಯಾಸೆಂಜರ್ ರೈಲು ಸಂಚಾರ ಪುನರಾರಂಭಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ರೋಟರಿ ಕ್ಲಬ್ ಮತ್ತು ಡಿ.ಟಿ.ಓ.ಎ ಮನವಿ
ದಾಂಡೇಲಿ : ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿರುವ ದಾಂಡೇಲಿ - ಅಳ್ನಾವರ ಪ್ಯಾಸೆಂಜರ್ ರೈಲು ಸಂಚಾರ ಪುನರಾರಂಭಕ್ಕೆ ನಗರದ ರೋಟರಿ ಕ್ಲಬ್ ಮತ್ತು ದಾಂಡೇಲಿ ಟ್ರಾನ್ಸ್ಪೋರ್ಟ್ ಆಪರೇಟರ್ಸ್ ಅಸೋಸಿಯೇಷನ್ ವತಿಯಿಂದ ಕೇಂದ್ರದ ರೈಲ್ವೆ ಖಾತೆ ಸಹಾಯಕ ಸಚಿವರಾದ ವಿ ಸೋಮಣ್ಣ ಅವರಿಗೆ ಲಿಖಿತ ಮನವಿಯನ್ನು ನೀಡಲಾಯಿತು. ಕಾರ್ಯಕ್ರಮದ ನಿಮಿತ್ತ ಅಳ್ನಾವರಕ್ಕೆ ಆಗಮಿಸಿದ್ದ ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಅವರನ್ನು ಇಂದು ಸೋಮವಾರ ಬೆಳಿಗ್ಗೆ 11:30 ಗಂಟೆ ಸುಮಾರಿಗೆ ಅಳ್ನಾವರದಲ್ಲಿ ಭೇಟಿ ಮಾಡಿದ ರೋಟರಿ ಕ್ಲಬ್ ಮತ್ತು ದಾಂಡೇಲಿ ಟ್ರಾನ್ಸಪೋರ್ಟ್ ಆಪರೇಟರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಮತ್ತು ಪ್ರಮುಖರು ಸ್ಥಗಿತಗೊಂಡಿರುವ ರೈಲು ಸಂಚಾರವನ್ನು ಪುನರಾರಂಭಿಸಬೇಕೆಂದು ಮನವಿ ಮಾಡಿದರು.