ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ವಿಶ್ವಕರ್ಮ ಜಯಂತಿ ಆಚರಣೆ
ಯಾವುದೇ ಸಮುದಾಯಗಳು ಏಳಿಗೆ ಆಗಲು ಆ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಶಿಕ್ಷಣವನ್ನೇ ಶಕ್ತಿಯನ್ನಾಗಿಸಿಕೊಂಡು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೂ ಸಹ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆ ನೀಡಬೇಕು. ಕೌಶಲ್ಯ ಎಂಬುದು ತಾಂತ್ರಿಕವಾಗಿ ನಿರಂತರವಾಗಿ ಬದಲಾವಣೆಯಾಗುತ್ತಿರುತ್ತದೆ. ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳಬೇಕು. ವಾಸ್ತು ಶಿಲ್ಪಿಗಳನ್ನು ನಿಜವಾದ ಇಂಜಿನಿಯರ್ ಗಳು ಎಂದು ಕರೆಯಲಾಗುತ್ತದೆ. ದೈವಿಕ ವಾಸ್ತುಶಿಲ್ಪಿ ಮತ್ತು ಕುಶಲಕರ್ಮಿ ಎಂದು ಪರಿಗಣಿಸಲ್ಪಟ್ಟ ಭಗವಾನ್ ವಿಶ್ವಕರ್ಮನನ್ನು ಗೌರವಿಸುವ ಮಹತ್ವದ ದಿನವಾಗಿ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುತ್ತದೆ. ಉತ್ಪಾದನಾ ಕೆಲಸಗಾರರು, ಎಂಜಿನಿಯರ್ಗಳು, ವಾಸ್ತುಶಿಲ್ಪಿಗಳು, ಯಂ