ಪೊಲೀಸ್ ಕನಸು ಕಟ್ಟಿಕೊಂಡ ಯುವತಿ ರೇಲ್ವೆ ಹಳಿಯಲ್ಲಿ ಬಿದ್ದು ಸಾವನ್ನಪ್ಪಿದ ಕುರಿತು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಬುಧವಾರ ಮಧ್ಯಾಹ್ನ 3 ಗಂಟೆಗೆ ಸ್ಪಷ್ಟನೆ ನೀಡಿದ್ದಾರೆ. ಧಾರವಾಡದಲ್ಲಿ ಪಲ್ಲವಿ ಎಂಬ ಯುವತಿ ಸಾಯುವ ಮುನ್ನ ಕಾರಣವನ್ನು ನೋಟ್ ನಲ್ಲಿ ನಮೂದು ಮಾಡಿದ್ದಾರೆ. ವಿದ್ಯಾರ್ಥಿನಿ ಪಲ್ಲವಿ ಸಾವಿನ ಕುರಿತು ವೈಯಕ್ತಿಕ ಆರೋಗ್ಯ ಸಮಸ್ಯೆ ಕಾರಣ ಹಾಗೂ ಕುಟುಂಬದ ಸಮಸ್ಯೆಗಳಿದ್ದವು ಎಂದು ತಿಳಿಸಿದ್ದಾರೆ.