ಚಿಕ್ಕಬಳ್ಳಾಪುರ: ಶುಭ ಕಾರ್ಯಗಳಿಗೆ ಬ್ರೇಕ್, ಚಿಕ್ಕಬಳ್ಳಾಪುರದಲ್ಲಿ ಹೂವು ಕೊಳ್ಳುವವರಿಲ್ಲದೆ ಪಾತಾಳಕ್ಕಿಳಿವ ಹೂವಿನ ಬೆಲೆ
ರಾಜ್ಯದಲ್ಲಿಯೇ ಬೃಹತ್ ಹೂವಿನ ಮಾರುಕಟ್ಟೆ ಎಂಬ ಅಭಿದಾನಕ್ಕೆ ಪಾತ್ರವಾಗಿರುವ ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯ ಮೇಲೆ ಪಿತೃಪಕ್ಷದ ಕರಿನೆರಳು ಬಿದ್ದಿರುವ ಪರಿಣಾಮ ನಿತ್ಯವೂ ಟನ್ಗಟ್ಟಲೆ ಬರುವ ಹೂವನ್ನು ಕೊಳ್ಳುವವರಿಲ್ಲದೆ ಬೀದಿಗೆ ಸುರಿಯುವ ಸಂದರ್ಭ ಎದುರಾಗಿದೆ.ಹೊರ ರಾಜ್ಯದ ವ್ಯಾಪಾರಿಗಳ ಸುಳಿವಿಲ್ಲದ್ದರಿಂದ ತಂದ ಹೂವು ಬಿಕರಿಯಾಗುತ್ತಿಲ್ಲ.ಬಿಕರಿಯಾದರೂ ಕೂಡ ರೈತರು ಹೂವನ್ನು ಬಿಡಿಸಿ ಮಾರುಕಟ್ಟೆಗೆ ತರುವ ಕೂಲಿಯೂ ಗಿಟ್ಟದಂತಾಗಿ ತಂದ ಹೂವನ್ನು ಮಾರುಕಟ್ಟೆಯಲ್ಲಿಯೇ ಬಿಟ್ಟುಹೋಗುವ ಪರಿಸ್ಥಿತಿ ನಿರ್ಮಾಣವಾಗಿ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾದೆ. ಪ್ರತಿವರ್ಷ ಪಿತೃಪಕ್ಷ ಬಂದರೆ ಸಾಕು ರೈತರಮೊಗ ಕಪ್ಪಿಡುತ್ತದೆ.ಸ್ಥಳೀಯ ವ್ಯಾಪಾರಿಗಳ ಕಾರಣಕ್ಕಾಗಿ ಮಾರುಕಟ್ಟೆ ನಿತ್ಯವೂ ಉಸಿರಾ