ಯೆಲಹಂಕ: ನಗರದಲ್ಲಿ ಹುಡುಗಿ ವಿಚಾರಕ್ಕೆ ಯುವಕನನ್ನ ಕಿಡ್ನಾಪ್ ಮಾಡಿ ಬಟ್ಟೆ ಬಿಚ್ಚಿ ಹಲ್ಲೆ, ಮರ್ಮಾಂಗಕ್ಕೆ ಒದ್ದು ವಿಕೃತಿ
ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೆ ಮತ್ತೊಂದು ಅಂತದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಆತ ಸಲ್ಪ ಯಾಮಾರಿದ್ರೂ ರೇಣುಕಾಸ್ವಾಮಿಯಂತೆ ಕೊಲೆಯಾಗಿಬಿಡ್ತಿದ್ದ. ದರ್ಶನ್ ಪ್ರಕರಣ ನೋಡಿ ಆತನಿಗೂ ಬಟ್ಟೆ ಬಿಚ್ಚಿ ಹಲ್ಲೆ ಮಾಡಿರೋ ಕೀಚಕರ ಕೃತ್ಯದಲ್ಲಿ ರೇಣುಕಾಸ್ವಾಮಿ ಹೆಸರು ಉಲ್ಲೇಖ ಮಾಡಿದ್ದಾರೆ. ಆ ಯುವಕನಿಗೆ ಹಲ್ಲೆ ಮಾಡುವಾಗ ದರ್ಶನ್ ಕೇಸ್ ಉಲ್ಲೇಖಿಸಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಸೋಲದೇವನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಬಗ್ಗೆ ದೂರು ದಾಖಲಾಗಿದ್ದು, ಆರೋಪಿಗಳನ್ನ ಬಂಧಿಸಲಾಗಿದೆ. ಹುಡುಗಿ ವಿಚಾರವಾಗಿ ಮಾಜಿ ಪ್ರಿಯತಮ ಕುಶಾಲ್ ನನ್ನ ಕರೆಸಿ ಕಿಡ್ನಾಪ್ ಮಾಡಲಾಗಿದೆ.