ಬೆಂಗಳೂರಿನಲ್ಲಿ ಆರ್ ಟಿಓ ಅಧಿಕಾರಿಗಳು ಖಾಸಗಿ ಶಾಲಾ ಬಸ್ ಗಳಿಗೆ ಕಠಿಣ ಕ್ರಮ ಕೈಗೊಂಡಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿದ, ವಿಮೆ (ಇನ್ಸೂರೆನ್ಸ್) ಮತ್ತು ಎಫ್ ಸಿ (ಫಿಟೈಸ್ ಸರ್ಟಿಫಿಕೇಟ್) ಇಲ್ಲದ 25ಕ್ಕೂ ಅಧಿಕ ಖಾಸಗಿ ಶಾಲಾ ಬಸ್ ಗಳನ್ನು ಕಳೆದ ಒಂದು ವಾರದಲ್ಲಿ ಸೀಜ್ ಮಾಡಲಾಗಿದೆ. ಆರ್ ಟಿಓ ಅಧಿಕಾರಿ ದೀಪಕ್ ಅವರ ನೇತೃತ್ವದಲ್ಲಿ ಮೂರು ತಂಡಗಳು ಕಾರ್ಯಾಚರಣೆ ನಡೆಸಿ ಈ ಕ್ರಮ ಕೈಗೊಂಡಿವೆ. ಸೀಜ್ ಆದ ಬಸ್ ಗಳ ಮಾಲೀಕರಿಗೆ ಹಾಗೂ ಆಯಾ ಖಾಸಗಿ ಶಾಲೆಗಳಿಗೆ ಆರ್ ಟಿಓ ಇಲಾಖೆಯಿಂದ ನೊಟೀಸ್ ನೀಡಲಾಗಿದೆ.