ಬೀದರ ಲೋಕಸಭಾ ಕ್ಷೇತ್ರದ ಭಾಲ್ಕಿ ತಾಲೂಕಿನ ಗಡಿಭಾಗದ ಆಳವಾಯಿ–ಯಲ್ಲಮವಾಡಿ ಗ್ರಾಮದಲ್ಲಿ ಇಂದು ಒಟ್ಟು 116 ಫಲಾನುಭವಿಗಳಿಗೆ ದಿವ್ಯಾಂಗ ಸಹೋದರ–ಸಹೋದರಿಯರು ಮತ್ತು ಹಿರಿಯ ನಾಗರಿಕರಿಗೆ ಪಿಎಂಡಿಕೆ ಯೋಜನೆ ಅಡಿಯಲ್ಲಿ ಸಹಾಯಕ ಸಾಧನ–ಸಲಕರಣೆಗಳನ್ನು ವಿತರಿಸಲಾಯಿತು. ಸಾಮಾಜಿಕ ಸಬಲೀಕರಣದ ಉದ್ದೇಶದಿಂದ ಜಾರಿಗೆ ಬಂದಿರುವ ಈ ಯೋಜನೆಯಡಿ ಅಗತ್ಯ ಸಾಧನಗಳು ಫಲಾನುಭವಿಗಳಿಗೆ ತಲುಪುವ ಮೂಲಕ ಅವರ ದಿನನಿತ್ಯ ಬದುಕಿನಲ್ಲಿ ಸುಲಭತೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡಲಿದೆ.