ಲಿಂಗಸೂರು: ಹಟ್ಟಿ ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಆಹಾರ ಸಾಮಗ್ರಿ ಕಾಳಸಂತೆಯಲ್ಲಿ ಮಾರಾಟ ಯತ್ನ,ರೆಡ್ ಹ್ಯಾಂಡ್ ಆಗಿ ಹಿಡಿದ ಸ್ಥಳೀಯರು,ವಿಡಿಯೋ ವೈರಲ್
ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕಿನ ಹಟ್ಟಿ ಪಟ್ಟಣದಲ್ಲಿಯ ಅಂಗನವಾಡಿ ಕೇಂದ್ರ ಸಂಖ್ಯೆ ಐದರಲ್ಲಿನ ಮಕ್ಕಳಿಗೆ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಅಂಶವುಳ್ಳ ಆಹಾರ ಸಾಮಗ್ರಿ ವಿತರಿಸುವ ಬದಲು ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿರುವ ಆರೋಪದ ವಿಡಿಯೋ ಒಂದು ಈಗ ಎಲ್ಲೆಡೆ ಭಾರಿ ವೈರಲ್ ಆಗಿದೆ. ಆಹಾರ ಸಾಮಗ್ರಿಗಳ ಚೀಲವನ್ನು ಆಟೋ ಒಂದರಲ್ಲಿ ಹಾಕಿಕೊಂಡು ಹೋಗಲು ಮುಂದಾದ ಸಂದರ್ಭದಲ್ಲಿಯೇ ಸ್ಥಳೀಯರು ಅದನ್ನ ತಡೆದು ಪರಿಶೀಲಿಸಿದಾಗ ವಿಷಯ ಬೆಳಕಿಗೆ ಬಂದಿದ್ದು ನಂತರ ಆಹಾರದ ಸಾಮಗ್ರಿಗಳ ಚೀಲವನ್ನು ಮರಳಿ ಅಂಗನವಾಡಿ ಕೇಂದ್ರದಲ್ಲಿ ಇರಿಸಲಾಗಿದೆ ಈ ಘಟನೆಯ ವಿಡಿಯೋ ಮಂಗಳವಾರ ಬೆಳಗ್ಗೆ ಎಲ್ಲೆಡೆ ವೈರಲ್ ಆಗಿದೆ.