ದಾವಣಗೆರೆ: ಕ್ಷಮೆ ಕೇಳುವವರೆಗು ಕಮಲ್ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬೇಡಿ: ನಗರದಲ್ಲಿ ಕನ್ನಡಪರ ಹೋರಾಟಗಾರರ ಆಗ್ರಹ
ತಮಿಳು ಭಾಷೆಯಿಂದ ಕನ್ನಡ ಭಾಷೆ ಹುಟ್ಟಿತು ಎಂದು ಹೇಳುವ ಮೂಲಕ ಕನ್ನಡವನ್ನು ಅವಮಾನಿಸಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ನಟ ಕಮಲ್ ಹಾಸನ್‌ಗೆ ಈ ವಿಚಾರವಾಗಿ ಕ್ಷಮೆ ಕೇಳುವಂತೆ ಕರ್ನಾಟಕ ಹೈಕೋರ್ಟ್ ಹೇಳಿದರೂ ಕಮಲ್ ಹಾಸನ್ ಕ್ಷಮೆ ಕೇಳಿಲ್ಲ. ಹಾಗಾಗಿ ಅವನ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೆಜಿ ಯಲ್ಲಪ್ಪ ಆಗ್ರಹಿಸಿದ್ದಾರೆ. ದಾವಣಗೆರೆ ನಗರದಲ್ಲಿ ಗುರುವಾರ ಅವರು ಮಾತನಾಡಿದ್ದು, ತಮಿಳು ನಾಡಲ್ಲಿ ರಾಜಕೀಯವಾಗಿ ಬೆಳೆಯಲು ಮತ್ತು ಸಿನಿಮಾ ಪ್ರಚಾರಕ್ಕಾಗಿ ಕನ್ನಡವನ್ನು ಅವಮಾನಿಸುವ ಕೆಲಸವನ್ನು ಕಮಲ್ ಹಾಸನ್ ಮಾಡಿರಬಹುದು ಎಂದರು.