ಶಿವಮೊಗ್ಗ: ನಾಳೆ ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ನಗರದಲ್ಲಿ ಪೊಲೀಸರಿಂದ ಪಥ ಸಂಚಲನ
ಶಿವಮೊಗ್ಗ ನಗರದಲ್ಲಿ ನಾಳೆ ಈದ್ ಮಿಲಾದ್ ಮೆರವಣಿಗೆ ಹಿನ್ನಲೆ ಪೊಲೀಸರಿಂದ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಪಥ ಸಂಚಲನವನ್ನ ಭಾನುವಾರ ಸಂಜೆ ನಡೆಸಲಾಯಿತು. ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ರೂಟ್ ಮಾರ್ಚ್ ನಡೆಸಲಾಗಿದ್ದು ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಶಿವಮೊಗ್ಗ ನಗರದ ಗಲ್ಲಿ ಗಲ್ಲಿಯಲ್ಲೂ ಪೊಲೀಸ್ ಯೋಜನೆ ಮಾಡಲಾಗಿದ್ದು ಸಿಸಿ ಕ್ಯಾಮರಗಳ ಮೂಲಕ ಶಿವಮೊಗ್ಗ ನಗರದ ಮೇಲೆ ಹದ್ದಿನ ಕಣ್ಣನ್ನ ಪೋಲೀಸರು ಇಟ್ಟಿದ್ದಾರೆ. ಈ ಪಥ ಸಂಚನದಲ್ಲಿ ಕೆಎಸ್ಆರ್ಪಿ ತುಕಡಿ, ಡಿಎಆರ್ ತುಕಡಿ,ಎಸ್ಎಎಫ್ ತುಕಡಿ, ಆರ್ಎಎಫ್ ಕಂಪನಿಗಳು ಭಾಗಿಯಾಗಿದ್ದರು.