ಮೊಳಕಾಲ್ಮುರು:-ಸಂಕ್ರಾಂತಿ ಎಂದರೆ ಸುಗ್ಗಿಯ ಸಂಭ್ರಮ, ಹಬ್ಬದ ಖುಷಿಯಲ್ಲಿ ಸಿಂಗಾರಗೊಳ್ಳುವ ಮಹಿಳೆಯರು ತಮ್ಮ ಜತೆಗೆ ಮನೆಯನ್ನು ಸಿಂಗರಿಸುವ ಖುಷಿ.ಅಂಥದ್ದೇ ಒಂದು ಖುಷಿ ಮನೆಯ ಮುಂದಿನ ರಂಗೋಲಿಯಲ್ಲಿ ಅರಳಿ ನಿಲ್ಲುತ್ತದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಕೋನಸಗರ ಗ್ರಾಮದಲ್ಲಿ ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ರಂಗೋಲಿ ಸ್ಪರ್ಧೆ ಏರ್ಪಡಿಸಿ ಮಹಿಳೆಯರಿಗೆ ಬಹುಮಾನ ನೀಡಲಾಗುತ್ತದೆ.ಈ ಕಾರ್ಯಕ್ರಮದ ಪರಿಕಲ್ಪನೆ ಇಡೀ ಗ್ರಾಮವನ್ನು ಸ್ವಚ್ಛಗೊಳಿಸುವುದಾಗಿದೆ.