ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಸ್ಕಾರ ಇಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಹೇಳಿದರು. ಆರನೇ ವಯಸ್ಸಿನಲ್ಲಿ ರಮೇಶ್ ಜಾರಕಿಹೊಳಿ ಕಳ್ಳು ಬಟ್ಟಿ ಸಾರಾಯಿ ಕಾಯಿಸುಕ್ಕೆ ಕಳಸಿದ್ದಾರೆ.ಅವನು ಒಬ್ಬ ಕೀಳು ಮಟ್ಟದ ರಾಜಕಾರಣಿ. ನಮ್ಮ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಾನೆ ನಮ್ಮ ತಂದೆ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾನೆ ಎಂದು ಏಕವಚನದಲ್ಲಿಯೇ ಹರಿಹಾಯ್ದರು. ಬುಧವಾರ ಅಥಣಿ ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಸ್ಕಾರ ಇಲ್ಲ. ಅವರ ಮನೆಯಲ್ಲಿ ಅವರಿಗೆ ಸಂಸ್ಕಾರ ಕೊಟ್ಟಿಲ್ಲ. ಅವರ ತಂದೆ ತಾಯಿ ಇವರಿಗೆ ಸಂಸ್ಕಾರ ಕಲಸಿಲ್ಲ ಎಂದು ಹೇಳಿದರು