ರಂಗಾಯಣ ಧಾರವಾಡದ ವತಿಯಿಂದ ಡಿ.೨೪ರಂದು ಸಂಜೆ ೫:೩೦ಕ್ಕೆ ಸೃಜನಾ ರಂಗಮಂದಿರದಲ್ಲಿ ಕಂದಗಲ್ಲರಿಗೆ ನಮಸ್ಕಾರ್ ಅರ್ಥಾತ್ ಕಂದಗಲ್ಲ ಭಾರತ ನಾಟಕ ಪ್ರದರ್ಶನ ನಡೆಯಲಿದೆ ಎಂದು ಧಾರವಾಡ ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಹೇಳಿದರು. ನಗರದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡದ ಷೇಕ್ಸಪೀಯರ್ ಎಂದೇ ಪ್ರಸಿದ್ಧರಾದ ಕಂದಗಲ್ಲ ಹನುಮಂತರಾಯರು ಬರೆದ ಕಂಪನಿ ಶೈಲಿಯ ಮಹಾಭಾರತ ಕುರಿತಾದ ೭ ನಾಟಕಗಳನ್ನು ಆಧರಿಸಿ ಆಧುನಿ