ನೆಲಮಂಗಲ: ಕಾಡುಪ್ರಾಣಿಗಳ ಬೇಟೆಯಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪಟ್ಟಣದಲ್ಲಿ ಬಂಧಿಸಿದ ಅರಣ್ಯ ಅಧಿಕಾರಿಗಳು
ನೆಲಮಂಗಲ: ಕಾಡುಪ್ರಾಣಿಗಳ ಬೇಟೆಯಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧಿಸಲಾಗಿದೆ. ಬೆಂಗಳೂರು ಸಂಚಾರಿ ಅರಣ್ಯಾಧಿಕಾರಿಗಳ ವಿಶೇಷ ಕಾರ್ಯಚರಣೆ ಮಾಡಿ ಆರೋಪಿಗಳನ್ನು ನೆಲಮಂಗಲದಲ್ಲಿ ಬಂಧಿಸಿದ್ದಾರೆ. ಕಾಡುಪ್ರಾಣಿಗಳ ಬೇಟೆಯಾಡುತ್ತಿದ್ದ ರಘು, ಸುಹಾಸ್, ಶಿವರಾಜ್ ಹಾಗೂ ಪವನ್ ಎಂಬ ನಾಲ್ವರನ್ನು ಸಿನಿಮೀಯ ರೀತಿಯಲ್ಲಿ ಚೇಸ್ ನಡೆಸಿ ಅಧಿಕಾರಿಗಳು ಅರೆಸ್ಟ್ ,ಮಾಡಿದ್ದಾರೆ. ಅರಣ್ಯಾಧಿಕಾರಿಗಳನ್ನು ಕಂಡ ಆರೋಪಿ ತಂಡ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ರು, ಅದ್ರೂ ಬಿಡದೆ ಸುಮಾರು 6 ಕಿಲೋಮೀಟರ್‌ಗಳ ಚೇಸಿಂಗ್ ಬಳಿಕ ಕನಕಪುರದ ಸಾತನೂರು ಸರ್ಕಲ್ ಬಳಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.