KDM916 ಎಂದು ಮುದ್ರೆ ಒತ್ತಿ ನಕಲಿ ಉಂಗುರುಗಳನ್ನ ಜ್ಯುಯಲರಿ ಅಗಂಡಿಯಲ್ಲಿ ಗಿರವಿ ಇಟ್ಟು ವಂಚನೆ ಮಾಡಿದ ಭೂಪನನ್ನ ಬಂಧಿಸುವಲ್ಲಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ನಿವಾಸಿ ಮಂಜುನಾಥ್@ಮಹೇಶ್ (45) ಬಂಧಿತ ಆರೋಪಿ.ಹುಣಸೂರು ತಾಲೂಕು ಗಾವಡಗೆರೆ ಗ್ರಾಮದ ಕಾವೇರಿ ಜ್ಯೂಯಲರ್ಸ್ ಗೆ ವಂಚಿಸಿದ ಭೂಪ.2023 ರಿಂದ ಇಲ್ಲಿಯವರೆಗೂ ಮಂಜುನಾಥ್ ಕಾರಿನಲ್ಲಿ ಬಂದು ನಕಲಿ ಉಂಗುರಗಳ ಮೇಲೆ ಅಸಲಿ ಮುದ್ರೆ ಒತ್ತಿ ನಂಬಿಸಿ ಗಿರವಿ ಇಟ್ಟಿದ್ದಾನೆ.ನಂತರ ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದು ಗ್ರಾಮಾಂತರ ಪೊಲೀಸರಿಗೆ ಮಾಲೀಕ ರಾಜೇಂದ್ರ ಸಿಂಗ್ ದೂರು ನೀಡಿದ್ದಾರೆ.ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.