ಬೆಂಗಳೂರು ಉತ್ತರ: ಕುಮಾರಸ್ವಾಮಿ ಖಾಲಿ ಟ್ರಂಕ್: ನಗರದಲ್ಲಿ ಡಿಸಿಎಂ ಡಿಕೆಶಿ ವಾಗ್ದಾಳಿ
ಬೆಂಗಳೂರಿನಲ್ಲಿ ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತನೆ ಮಾಡುತ್ತಿರುವ ಬಗ್ಗೆ ಕುಮಾರಸ್ವಾಮಿ ಮಾಡುತ್ತಿರುವ ಟೀಕೆಗಳನ್ನು ಡಿಸಿಎಂ ಡಿಕೆ ಶಿವಕುಮಾರ್ 'ಖಾಲಿ ಟ್ರಂಕ್' ಎಂದು ತಳ್ಳಿಹಾಕಿದ್ದಾರೆ. ಭಾನುವಾರ ಕಬ್ಬನ್ ಪಾರ್ಕ್ನಲ್ಲಿ ಸಾರ್ವಜನಿಕರೊಂದಿಗೆ ಮಾತನಾಡಿದ ಅವರು, ಆಸ್ತಿ ದಾಖಲೆಗಳನ್ನು ಸರಿಪಡಿಸಿ ಜನರಿಗೆ ನೀಡುವುದು ಸರ್ಕಾರದ ಆರನೇ ಗ್ಯಾರಂಟಿ ಎಂದರು. ಇದಕ್ಕಾಗಿ ಕೇವಲ 5% ಅಭಿವೃದ್ಧಿ ಶುಲ್ಕ ಕೇಳಲಾಗಿದೆ ಎಂದು ತಿಳಿಸಿದರು.