ಆಳಂದ: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ನಾಗರಿಕ ಸಮಾಜ ಪ್ರಗತಿಯತ್ತ ಹತ್ತರಗಾ (ಎಸ್ ) ನಲ್ಲಿ ನಂದವಾಡಗಿ ಪೀಠಾಧಿಪತಿ ಡಾ.ಅಭಿನವ ಶಿವಾಚಾರ್ಯ
ಧಾರ್ಮಿಕ ಆಚರಣೆಯೊಂದಿಗೆ ಮಕ್ಕಳನ್ನು ಶಿಕ್ಷಣ ಮತ್ತು ಒಳ್ಳೆಯ ಸಂಸ್ಕಾರ ನೀಡುವ ಕೆಲಸ ಮಾಡಿದರೆ ನಾಗರಿಕ ಸಮಾಜ ಪ್ರಗತಿಯತ್ತ ಸಾಗಲು ಸಾಧ್ಯವಿದೆ ಎಂದು ಆಳಂದ, ನಂದವಾಡಗಿ, ಜಾಲ ವಾದಿ ಮತ್ತು ಹತ್ತರಗಾ ಮಹಾಂತೇಶ್ವರ ಸಂಸ್ಥಾನ ಹಿರೇಮಠ ಪೀಠದ ಕಿರಿಯ ಶ್ರೀಗಳಾದ ಡಾ. ಅಭಿನವ ಚನ್ನಬಸವ ಶಿವಾಚಾರ್ಯ ಹೇಳಿದರು. ಆಳಂದ ತಾಲೂಕಿನ ಕೋತನಹಿಪ್ಪರಗಾ ಗ್ರಾಮದಿಂದ ಅರ್ಧ ಕಿ.ಮೀ ಅಂತರದ ನೆರೆಯ ಬಸವ ಕಲ್ಯಾಣ ತಾಲೂಕಿನ ಹತ್ತರಗಾ ಎಸ್. ಗ್ರಾಮದಲ್ಲಿರುವ ಆಳಂದ ಶಾಖೆ ಮಹಾಂತೇಶ್ವರ ಹಿರೇಮಠದ ಮಹಾಂತ ಶಿವಯೊಗಿಗಳ ಪುಣ್ಯರಾಧನೆ ಅಂಗವಾಗಿ ಹಮ್ಮಿಕೊಂಡ ಧಾರ್ಮಿಕ ಸಮಾರಂಭದಲ್ಲಿ ಭಕ್ತಾದಿಗಳು ನೀಡಿದ ಗುರುವಂದನೆ ಸ್ವೀಕರಿಸಿ ಮಂಗಳವಾರ ರಾತ್ರಿ 7 ಘಂಟೆಗೆ ಆಶೀರ್ವಚನ ನೀಡಿದರು.