ಬೆಂಗಳೂರು ಉತ್ತರ: ಕುಮಾರಸ್ವಾಮಿ ಎಲ್ಲಿ ಕೈಗಾರಿಕೆ ತರುತ್ತಾರೆ ಹೇಳಲಿ: ಡಿಕೆಶಿ
ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಹೇರೋಹಳ್ಳಿಯಲ್ಲಿ ಮಾತನಾಡಿ, ಕುಮಾರಸ್ವಾಮಿ ಅವರು ಕೈಗಾರಿಕೆ ತರುವುದಾಗಿ ಹೇಳುತ್ತಿದ್ದಾರೆ. ಅವರು ಯಾವ ಸ್ಥಳದಲ್ಲಿ ಕೈಗಾರಿಕೆ ತರುತ್ತಾರೆ ಎಂಬುದನ್ನು ಸ್ಪಷ್ಟಪಡಿಸಲಿ. ರಾಮನಗರ, ಬಿಡದಿ ಅಥವಾ ಮಂಡ್ಯದಲ್ಲಿ ಎಲ್ಲಿ ಕೈಗಾರಿಕೆ ಸ್ಥಾಪಿಸುತ್ತಾರೆ ಎಂಬುದರ ಪಟ್ಟಿ ನೀಡಲಿ. ಅಗತ್ಯ ಭೂಮಿಗಾಗಿ ಅರ್ಜಿ ಸಲ್ಲಿಸಲಿ. ಸುಮ್ಮನೆ ಮಾತನಾಡುವುದರಿಂದ ಪ್ರಯೋಜನವಿಲ್ಲ. ಎ ಖಾತಾ ಮತ್ತು ಬಿ ಖಾತಾ ಪರಿವರ್ತನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಹಿರಂಗ ಚರ್ಚೆಗೆ ಆಹ್ವಾನಿಸುತ್ತಿರುವುದಾಗಿ ತಿಳಿಸಿದರು.