ಕಲಬುರಗಿ: RSS ಪಥಸಂಚಲನ ಜಟಾಪಟಿ: ನಗರದಲ್ಲಿ ಕರೆದಿದ್ದ ಶಾಂತಿ ಸಭೆ ಅಶಾಂತಿಯೊಂದಿಗೆ ಮುಕ್ತಾಯ, ಸಭೆ ಬಳಿಕ ಆರ್‌ಎಸ್‌ಎಸ್ ವಿರುದ್ಧ ಆಕ್ರೋಶ
ಕಲಬುರಗಿ : ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ವಿವಾದಕ್ಕೆ ಸಂಬಂಧಿಸಿದಂತೆ, ಇಂದು ಕಲಬುರಗಿ ನಗರದ ಡಿಸಿ ಕಚೇರಿಯಲ್ಲಿ ಕರೆಯಲಾಗಿದ್ದ ಮಹತ್ವದ ಶಾಂತಿ ಸಭೆ ಯಾವುದೇ ನಿರ್ಣಯ ನಿರ್ಧಾರಗಳನ್ನ ಕೈಗೊಳ್ಳದೇ ವಿಫಲವಾಗಿದೆ.. ಅ28 ರಂದು ಮಧ್ಯಾನ 2 ಗಂಟೆಗೆ ಶಾಂತಿ ಸಭೆ ಮುಕ್ತಾಯವಾಗಿ ದಲಿತಪರ ಸಂಘಟನೆಗಳು ಹೊರಬರ್ತಿದ್ದಂಗೆ ಆರ್‌ಎಸ್‌ಎಸ್ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.