ಕಂಪ್ಲಿ: ಮಾರುತಿ ನಗರದಲ್ಲಿ ಕೋತಿ ಕಾಟಕ್ಕೆ ನಿವಾಸಿಗಳು ತತ್ತರ, ವೃದ್ದೆಯ ಮನೆಯ ಸಾಮಾಗ್ರಿಗಳನ್ನ ಚಲ್ಲಪಿಲ್ಲಿ ಮಾಡಿದ ಕೋತಿ
Kampli, Ballari | Oct 19, 2025 ಕಂಪ್ಲಿ ಪಟ್ಟಣದ ಮಾರುತಿ ನಗರ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿಂದ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ. ಭಾನುವಾರ (ಅ.19) ಸಂಜೆ 5 ಗಂಟೆಯ ಸುಮಾರಿಗೆ ವೃದ್ಧೆಯೊಬ್ಬರ ಮನೆಯಲ್ಲಿ ಕೋತಿಯೊಂದು ನುಗ್ಗಿ ಮನೆಯಲ್ಲಿದ್ದ ಸಾಮಾನುಗಳನ್ನು ಚಲ್ಲಪಿಲ್ಲಿ ಮಾಡಿರುವ ಘಟನೆ ನಡೆದಿದೆ. ಈ ರೀತಿಯ ಘಟನೆಗಳು ದಿನೇದಿನೇ ಹೆಚ್ಚಾಗುತ್ತಿದ್ದು, ಮಕ್ಕಳಿಗೂ ವೃದ್ಧರಿಗೂ ಆತಂಕ ಉಂಟಾಗಿದೆ. ನಿವಾಸಿಗಳು ಅರಣ್ಯ ಅಧಿಕಾರಿಗಳಿಗೆ ಕೋತಿಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟುಕೊಡಲು ಮನವಿ ಮಾಡಿದ್ದಾರೆ. ಆದರೆ ಇಂದಿಗೂ ಕ್ರಮ ಕೈಗೊಳ್ಳದಿರುವ ಹಿನ್ನೆ