ಕೊಳ್ಳೇಗಾಲ: ಸೂರಾಪುರದಲ್ಲಿ ಕಬ್ಬು ಕಟಾವಿನ ಮಧ್ಯೆ ಹೆಬ್ಬಾವು ಪ್ರತ್ಯಕ್ಷ: ಕೂಲಿಕಾರ್ಮಿಕರಲ್ಲಿ ಆತಂಕ
ಕೊಳ್ಳೇಗಾಲ ತಾಲ್ಲೂಕಿನ ಸೂರಾಪುರ ಗ್ರಾಮದಲ್ಲಿ ಕಬ್ಬು ಕಟಾವು ನಡೆಯುತ್ತಿದ್ದ ವೇಳೆ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಈ ವೇಳೆ ಕಟಾವು ಕೆಲಸದಲ್ಲಿ ತಲ್ಲಿನರಾಗಿದ್ದ ಕೂಲಿಕಾರ್ಮಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಸೂರಾಪುರ ಗ್ರಾಮದ ಜಗದೀಶ್ ಎಂಬುವವರ ಜಮೀನಿನಲ್ಲಿ ಕೂಲಿಕಾರ್ಮಿಕರು ಕಬ್ಬು ಕಟಾವು ಕಾರ್ಯದಲ್ಲಿ ತೊಡಗಿದ್ದ ಸಂದರ್ಭ, ಸುಮಾರು 8 ಅಡಿ ಉದ್ದದ ಮತ್ತು 10 ಕೆಜಿ ತೂಕದ ಹೆಬ್ಬಾವು ಗದ್ದೆಯೊಳಗೆ ಕಾಣಿಸಿಕೊಂಡಿತು. ಇದರಿಂದ ಕೆಲಸದಲ್ಲಿದ್ದ ಕಾರ್ಮಿಕರು ಮತ್ತು ಸ್ಥಳೀಯರು ಆತಂಕಕ್ಕೆ ಒಳಗಾದರು. ಹಠಾತ್ ಈ ಘಟನೆಗೆ ಬೆಚ್ಚಿಬಿದ್ದ ಕಾರ್ಮಿಕರು ಕೆಲಸವನ್ನು ಸ್ಥಗಿತಗೊಳಿಸಿ ಹಿಂಜರಿದರು. ು