ಧಾರವಾಡ: ಪೊಲೀಸ್ ಇಲಾಖೆಗೆ ಸೇರುವವರು ಜನಸ್ನೇಹಿಯಾಗಿ ವೃತ್ತಿ ನಿರ್ವಹಿಸಿ: ನಗರದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್
ಪೊಲೀಸ್ ಇಲಾಖೆಗೆ ಸೇರುವವರು ಜನಸ್ನೇಹಿಯಾಗಿ, ಜನಪರವಾಗಿ ವೃತ್ತಿ ನಿರ್ವಹಿಸಿ, ಯಶಸ್ವಿಯಾಗಬೇಕು ಎಂದು ರಾಜ್ಯ ಪೊಲೀಸ್ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದರು. ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನಗರದ ಕಲಘಟಗಿ ರಸ್ತೆಯ ಗಿರಿನಗರದ ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಜರುಗಿದ 2ನೇ ತಂಡದ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿ, ತರಬೇತಿ ಗುಣಮಟ್ಟದ ಮೇಲೆ ಪೊಲೀ