ತರಕಾರಿ ಮಾರಾಟಗಾರರ ಸಂಘದ ಅಲಿಪೀರ್ ಮಹ್ಮದ್ ವಸೀಮ್ ಹಾಗೂ ಇತರರಿಂದ ತಮ್ಮ ವಿರುದ್ಧ ಮಾಡಲ್ಪಟ್ಟ ಆರೋಪಗಳು ಸಂಪೂರ್ಣ ನಿರಾಧಾರವೆಂದು ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್. ಮಹಾವೀರ್ ತಿಳಿಸಿದ್ದಾರೆ. ಈ ಬಗ್ಗೆ ಮ ಹಾನಗರ ಪಾಲಿಕೆಯ ಉಪ ಆಯುಕ್ತ ಸಂತೋಷಿ ರಾಣಿಗೆ ಮನವಿ ಸಲ್ಲಿಸಿದ ಅವರು, ರವೀಂದ್ರ ಜಲ್ದಾರ್ ವಿರುದ್ಧ ನಾನು ಮಾಡಿದ ಆರೋಪ ನಿಜ. ಆದರೆ ನನ್ನ ಮೇಲೆ ಮಾಡಿರುವ ಆರೋಪಗಳು ಸುಳ್ಳು, ಅವು ಸಾಬೀತಾದರೆ ಯಾವುದೇ ಶಿಕ್ಷೆ ವಿಧಿಸಿ ದರೂ ಸ್ವೀಕರಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.