ಹೈದರಾಬಾದ್ನಲ್ಲಿ 23 ಕೋಟಿ ರೂಪಾಯಿ ವಂಚನೆ ಮಾಡಿ ಪೊಲೀಸ್ ಕಸ್ಟಡಿಯಿಂದಲೇ ತಪ್ಪಿಸಿಕೊಂಡು ಬಂದಿದ್ದ ಹೈದರಾಬಾದ್ ಮೂಲದ ವಂಚಕ ದಂಪತಿಯನ್ನು ಬಂಧಿಸಿ ಅವರನ್ನು ಹೈದರಾಬಾದ್ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದರು. ನಗರದಲ್ಲಿ ಶನಿವಾರ ಸಂಜೆ 5 ಗಂಟೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿಗಳು ಹುಬ್ಬಳ್ಳಿ, ಧಾರವಾರ ಬೈಪಾಸ್ ಮೂಲಕ ರಾಮದುರ್ಗದತ್ತ ಹೊರಟಿದ್ದರು.