ರಾಯಚೂರು: ಸೆ.17 ರಂದು ಭಗವಾನ್ ವಿಶ್ವಕರ್ಮ ಜಯಂತಿ ಆಚರಣೆ,ನಗರದಲ್ಲಿ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಬ್ರಹ್ಮ ಗಣೇಶ ಹೇಳಿಕೆ
ಸೆಪ್ಟೆಂಬರ್ 17 ನೇ ತಾರೀಖಿನಂದು ರಾಯಚೂರ ನಗರದಲ್ಲಿ ಭಗವಾನ್ ವಿಶ್ವಕರ್ಮರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಜಿಲ್ಲಾ ಅಧ್ಯಕ್ಷ ಬ್ರಹ್ಮ ಗಣೇಶ ತಿಳಿಸಿದ್ದಾರೆ. ಮಂಗಳವಾರ ರಾಯಚೂರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಜಿಲ್ಲಾ ಆಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು ವಿಶ್ವಕರ್ಮ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.