ಶಿಗ್ಗಾಂವ: ಬಂಕಾಪುರ ಬಳಿ 2.20ಲಕ್ಷ ಮೌಲ್ಯದ ಅಕ್ರಮ ಅನ್ನಭಾಗ್ಯ ಅಕ್ಕಿ ಚೀಲ ವಶಕ್ಕೆ; ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು
ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಅನ್ನಭಾಗ್ಯ ಯೋಜನೆಯ 206 ಅಕ್ಕಿ ಚೀಲಗಳನ್ನು ಪತ್ತೆ ಹಚ್ಚಿರುವ ಘಟನೆ ನಡೆದಿದೆ. 2.20 ಲಕ್ಷ ಮೌಲ್ಯದ 16,475 ಕೆಜಿ ಪಡಿತರ ಅಕ್ಕಿಯನ್ನು ತಹಶೀಲ್ದಾರ್ ನೇತೃತ್ವದ ತಂಡ ವಶಕ್ಕೆ ಪಡೆದಿದೆ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.