ನವಲಗುಂದ: ನವಲಗುಂದದಲ್ಲಿ ಶವ ಪರೀಕ್ಷಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಎನ್.ಎಚ್.ಕೋನರಡ್ಡಿ
ನವಲಗುಂದ ನಗರದ ತಾಲೂಕಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜನೀಯರಿಂಗ್ ವಿಭಾಗ ಸಂಯುಕ್ತಾಶ್ರಯದಲ್ಲಿ ರೂ.45ಲಕ್ಷಗಳ ವೆಚ್ಚದಲ್ಲಿ ಶವ ಪರೀಕ್ಷಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕರಾದ ಎನ್.ಎಚ್.ಕೋನರಡ್ಡಿ ಅವರು ಭೂಮಿ ಪೂಜೆ  ನೇರವೆರಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆ ಮುಖ್ಯಾಧಿಕಾರಿ ಡಾ. ರೂಪಾ, ಅಧಿಕಾರಿಗಳಾದ ಎಇಇ  ಮಲ್ಲಿಕಾರ್ಜುನ ಕುಕಟನೂರ, ಶ್ರೀಮತಿ ಶೀಲಾ, ಅಂಜುಮನ್ ಅಧ್ಯಕ್ಷ  ಅಲ್ಲಾಸಾಬ ಕಲಕುಟ್ರಿ, ನವಲಗುಂದ ತಾಲೂಕ ಕೃಷಿಕ ಸಮಾಜದ ಅಧ್ಯಕ್ಷ  ಎಸ್ ವಿ ಬಳಿಗೇರ ಸೇರಿದಂತೆ ಉಪಸ್ಥಿತಿ ಇದ್ದರು.