ತುಮಕೂರು: ಸೆ. 22 ರಂದು ದಸರಾ ಪ್ರಯುಕ್ತ, ಅಂಬಾರಿ ಉಚಿತ ಬಸ್ ಸೇವೆಗೆ ಸಚಿವ ಪರಮೇಶ್ವರ್ ಚಾಲನೆ : ಸಾರಿಗೆ ಸಂಸ್ಥೆ ಡಿಸಿ ಚಂದ್ರಶೇಖರ್
ದಸರಾ ಪ್ರಯುಕ್ತ ಅಂಬಾರಿ ಬಸ್ ಅನ್ನು ಸಿಟಿ ರೌಂಡ್ಸ್ ಗಾಗಿ ಸಾರ್ವಜನಿಕರ ಉಚಿತ ಸೇವೆಗಾಗಿ ಸೆ. 22 ರಂದು ಸಂಜೆ 6 ಗಂಟೆಗೆ ತುಮಕೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ. ಈ ಬಗ್ಗೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣ ಅಧಿಕಾರಿ ಚಂದ್ರಶೇಖರ್ ತಿಳಿಸಿದರು. ಅವರು ಬೆಸ್ಕಾಂ, ಮಹಾನಗರ ಪಾಲಿಕೆ, ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ತುಮಕೂರು ನಗರದಲ್ಲಿ ಅಂಬಾರಿ ಬಸ್ ನಲ್ಲಿ ಪ್ರಯಾಣ ಮಾಡಿ ಸುಗಮ ಸಂಚಾರದ ಬಗ್ಗೆ ಖಾತ್ರಿಪಡಿಸಿಕೊಂಡು ಭಾನುವಾರ ಮಧ್ಯಾಹ್ನ 1.20 ರಲ್ಲಿ ಮಾತನಾಡಿದರು.ಮೈಸೂರಿನಲ್ಲಿ ಲಂಡನ್ ಬಿಗ್ ಬಸ್ ಮಾದರಿಯ ಅಂಬಾರಿ ಬಸ್ ಹೇಗೆ ಕಾರ್ಯಾಚರಣೆ ಆಗುತ್ತದೆಯೋ ಅದೇ ರೀತಿ ತುಮಕೂರಿನಲ್ಲೂ ಅಂಬಾರಿ ಬಸ್ ಸೇವೆ ನೀಡಲಾಗುತ್ತಿದೆ ಎಂದರು.