ವಿಧಾನಸೌಧದಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಅವರು ರಾಜ್ಯಪಾಲರ ಭಾಷಣ ಕುರಿತಂತೆ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಮಾತಮಾಡಿ, ರಾಜ್ಯಪಾಲರು ರಾಜ್ಯದಲ್ಲಿ ಸಂವಿಧಾನ ಮುಖ್ಯಸ್ಥರು ಹಾಗಾಗಿ ರಾಜ್ಯಪಾಲರಿಗೆ ಸಲಹೆ ಕೊಡೋದು ಸಂಪುಟಕ್ಕೆ ಬಿಟ್ಟ ವಿಚಾರವಾಗಿದೆ. ಆದರೆ ರಾಜ್ಯಪಾಲರು ಕೆಲವೇ ಸೆಕೆಂಡ್‌ಗಳಲ್ಲಿ ಭಾಷಣ ಮುಗಿಸಿದ್ದು ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿದಂತೆ. ತಮಿಳುನಾಡು, ಕೇರಳದಂತೆ ಕರ್ನಾಟಕದಲ್ಲೂ ರಾಜ್ಯಪಾಲರ ನಡೆ ಮೇಲೆ ಕೇಂದ್ರ ಸರ್ಕಾರ ರಾಜಕೀಯವಾಗಿ ಪ್ರಭಾವ ಬೀರುತ್ತಿದೆ ಎಂದು ಆರೋಪಿಸಿದರು.