ಕಾರಟಗಿ: ಅಖಿಲ ಭಾರತ ಕಾರ್ಮಿಕಸಂಘಟನೆಗಳ ಕೇಂದ್ರ ಸಮಿತಿಯಿಂದ ಪುರಸಭೆಯಲ್ಲಿ ಸ್ವಚ್ಚತಾ ಕಾರ್ಮಿಕರಿಗೆ ನೇರಪಾವತಿಗೆ ಒತ್ತಾಯಿಸಿ ಅನಿರ್ಧಿಷ್ಟ ಧರಣಿ
ಅಖಿಲ_ಭಾರತ_ಕಾರ್ಮಿಕ_ಸಂಘಟನೆಗಳ_ಕೇಂದ್ರೀಯ_ಸಮಿತಿ ನೇತೃತ್ವದಲ್ಲಿ ಕಾರಟಗಿ ಪುರಸಭೆಯಲ್ಲಿ ಸ್ವಚ್ಚತಾ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ನೇರಪಾವತಿಗೆ ಒಳಪಡಿಸುವ ಬೇಡಿಕೆಯನ್ನು ಇಟ್ಟುಕೊಂಡು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 13ನೇ ದಿನಕ್ಕೆ ಮುಂದುವರೆದಿದೆ ಆಗಸ್ಟ್ 02 ರಂದು ಮಧ್ಯಾಹ್ನ 2-00 ಗಂಟೆಗೆ ಧರಣಿ ನಿರತ ಪೌರ ಕಾರ್ಮಿಕರು ಸಚಿವರು ಅಧಿಕಾರಿಗಳು ಎಲ್ಲರು ಇಲ್ಲಿಯೇ ಓಡಾಡುತ್ತಾರೆ ನಮ್ಮ ಸಮಸ್ಯ ಆಲಿಸುತ್ತಿಲ್ಲ ಎಂದು ಅನಿರ್ಧಿಷ್ಟ ಅವಧಿಯ ಧರಣಿ ನಿರತ ಪೌರ ಕಾರ್ಮಿಕರು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು