ರಾಮದುರ್ಗ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 12 ನಿರ್ದೇಶಕರು ಗೆಲ್ಲುತ್ತೇವೆ: ನಗರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 12 ನಿರ್ದೇಶಕರು ಗೆಲ್ಲುತ್ತೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಆದಷ್ಟು ಅವಿರೋಧವಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಒಂದು ವೇಳೆ ಅವಿರೋಧವಾಗದಿದ್ದರೂ ಬಹುಮತವನ್ನು ಮಾಡಿಕೊಂಡು ಚುನಾವಣೆಯನ್ನು ನಡೆಸುತ್ತೇವೆ. 12 ಕಡೆ ನಾವು ಗೆದ್ದೆ ಗೆಲ್ಲುತ್ತೇವೆ. ಡಿಸಿಸಿ ಬ್ಯಾಂಕ್ ನಮ್ಮ ಅಸ್ತಿತ್ವಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು ಗುರುವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ರಾಜಕಾರಣದಿಂದ ಸಹಕಾರ ರಂಗ ಕೆಡುತ್ತಿದೆ. ಚುನಾವಣೆ ಎಂದ ಮೇಲೆ ಸರ್ಕಸ್ ಮತ್ತು ನಾಟಕಗಳು ಹೀಗೆಯೇ ನಡೆಯುತ್ತವೆ. ಎಂದರು