ಬಸವಕಲ್ಯಾಣ: ಸಸ್ತಾಪೂರ ಗ್ರಾಮದಲ್ಲಿ ನಶಾ ಮುಕ್ತ ಅಭಿಯಾನ ನಿಮಿತ್ತ ವಿದ್ಯಾರ್ಥಿಗಳಿಗಾಗಿ ರಂಗೋಲಿ ಹಾಗೂ ಪ್ರಬಂಧ ಸ್ಪರ್ಧೆ; ಬಹುಮಾನ ವಿತರಣೆ
ತಾಲೂಕಿನ ಸಸ್ತಾಪುರ ಗ್ರಾಮದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೀದರ, ಹಾಗೂ ಗ್ರಾಮ ಪಂಚಾಯತ ಗುಂಡೂರ ಮತ್ತು ಸರ್ಕಾರಿ ಪ್ರೌಢಶಾಲೆ ಸಸ್ತಾಪುರ ಇವರ ಸಹಯೋಗದಲ್ಲಿ ಶಾಲಾ ಆವರಣದಲ್ಲಿ ನಶಾ ಮುಕ್ತ ಕಾರ್ಯಕ್ರಮದ ನಿಮಿತ್ಯ ರಂಗೋಲಿ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು,ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ರೇಖಾ ಎಸ್ ಅವರು ಮಾತನಾಡಿ ಭಾರತ ಸರ್ಕಾರವು 2020 ರಿಂದ ನಶಾಮುಕ್ತ ಭಾರತ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದು ಇದರ ಮುಖ್ಯ ಉದ್ದೇಶವೆಂದರೆ ಜನರಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವುದು ,ವ್ಯಸನ ಗ್ರಸ್ತರಿಗೆ ಪುನರ್ವಸತಿ ಮತ್ತು ಚಿಕಿತ್ಸೆ ನೀಡುವುದು, ಹೊಸ ಪೀಳಿಗೆಗೆ ದುಶ್ಚಟಗಳಿಂದ ದೂರವಿರುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ