ದೊಡ್ಡಬಳ್ಳಾಪುರ : ದೊಡ್ಡ ಹೆಜ್ಜಾಜಿ, ಕಸಾಘಟ್ಟ. ಐನಹಳ್ಳಿ, ಕಾರೇಪುರ, ವೆಂಕಟೇಶಪುರ ಗ್ರಾಮಗಳಲ್ಲಿ ಬಲವಂತದ ಕೆಎಚ್ಬಿ ಭೂ-ಸ್ವಾಧೀನ ವಿರೋಧಿಸಿ ನಡೆಯುವ ಅನ್ನದಾತರ ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನೆಗೆ ಸಿಪಿಐ(ಎಂ) ಪಕ್ಷ ಬೆಂಬಲಿಸುತ್ತದೆ ಎಂದು ಪಕ್ಷದ ತಾಲ್ಲೂಕು ಕಾರ್ಯದರ್ಶಿ ರುದ್ರಾರಾಧ್ಯ ಅವರು ತಿಳಿಸಿದರು. ಇಂದು ನಗರದ ಸಿಪಿಐ (ಎಂ) ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದೇ ಅಕ್ಟೋಬರ್ 28 ರಂದು ಕೆಎಚ್ಬಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ನಡೆಯುವ ಪ್ರತಿಭಟನೆಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದು ಘೋಷಣೆ ಮಾಡಿದರು.