ಕಲಬುರಗಿ: ನಗರದ ಶ್ರೀ ಶರಣಬಸವೇಶ್ವರ ಸಂಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ: ಲಿಂಗೈಕ್ಯ ಶ್ರೀ ಅಪ್ಪಾ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಿಎಂ
ಕಲಬುರಗಿ : ಆಗಷ್ಟ್ 14 ರಂದು ಲಿಂಗೈಕ್ಯರಾದ ಶ್ರೀ ಶರಣಬಸವೇಶ್ವರ ಸಂಸ್ಥಾನದ ಎಂಟನೇ ಪೀಠಾಧಿಪತಿ ಶ್ರೀ ಶರಣಬಸಪ್ಪ ಅಪ್ಪಾ ಲಿಂಗೈಕ್ಯರಾದ ಹಿನ್ನಲೆಯಲ್ಲಿ, ಇಂದು ಸಿಎಂ ಸಿದ್ದರಾಮಯ್ಯ ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ಸಂಸ್ಥಾನಕ್ಕೆ ಭೇಟಿ ನೀಡಿ ಅಪ್ಪಾ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.. ಸೆ17 ರಂದು ಮಧ್ಯಾನ 2 ಗಂಟೆಗೆ ಮಹಾದಾಸೋಹ ಮನೆಗೆ ಭೇಟಿ ನೀಡಿ, ಅಪ್ಪಾರ. ಭಾವಚಿತ್ರಕ್ಕೆ ಪುಷ್ಪಾರ್ಪಚನೆ ಮಾಡಿದರು. ಬಳಿಕ ಅಪ್ಪಾರ ಧರ್ಮಪತ್ನಿ ಶ್ರೀಮತಿ ದಾಕ್ಷಾಯಿಣಿ ಅವ್ವಾ ಮತ್ತು ಪುತ್ರ ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪರಿಗೆ ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿದರು