ಚಾಮರಾಜನಗರ: ಪಣ್ಯದಹುಂಡಿ ಗ್ರಾಮದಲ್ಲಿ ರಾಜ ಕಾಲುವೆ ಮುಚ್ಚಿ ರಸ್ತೆ ನಿರ್ಮಾಣ ಗ್ರಾಮಸ್ಥರ ಆಕ್ರೋಶ
ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಗ್ರಾಮದಲ್ಲಿ ಕ್ರಷರ್ ಟಿಪ್ಪರ್ ಗಳು ಓಡಾಡಲು ರಾಜಕಾಲುವೆಯನ್ನು ಅಕ್ರಮವಾಗಿ ಮುಚ್ಚಿ ರಸ್ತೆ ನಿರ್ಮಾಣ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜಕಾಲುವೆ ಮುಚ್ಚಿ ಅದರ ಮೇಲೆ ಯಾರ ಅನುಮತಿ ಇಲ್ಲದೆ ರಸ್ತೆ ನಿರ್ಮಾಣ ಮಾಡಿ ಭಾರಿ ವಾಹನಗಳು ಓಡಾಟಕ್ಕೆ ಅನುಕೂಲ ಮಾಡಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ.ತಹಶಿಲ್ದಾರ್, ಆರ್ ಟಿಒ ಅಧಿಕಾರಿಗಳು, ಗಣಿ ಮತ್ತು ವಿಜ್ಞಾನ ಇಲಾಖೆ ಅಧಿಕಾರಿಗಳು ಯಾರು ಕೂಡ ಇತ್ತ ತಲೆಯನ್ನೆ ಹಾಕಿಲ್ಲ ಎಂದು ಗ್ತಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು