ಮಂಡ್ಯ: ಅ.12ಕ್ಕೆ ಕೆರಗೋಡು ಗಣಪತಿ ವಿಸರ್ಜನೆಗೆ ಯತ್ನಾಳ್ ಆಗಮನ: ನಗರದಲ್ಲಿ ಭಜರಂಗಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್
Mandya, Mandya | Oct 9, 2025 ಅ.12ಕ್ಕೆ ಕೆರಗೋಡಿಗೆ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆಗಮಿಸಿ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಭಜರಂಗಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಮಾಹಿತಿ ನೀಡಿದರು. ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವೇಳೆ ಮಂಡ್ಯದ ಕಾಳಿಕಾಂಭ ದೇವಸ್ಥಾನದಿಂದ ಕೆರಗೋಡು ಗ್ರಾಮದವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಲಾಗುವುದು ಎಂದರು. ಬೈಕ್ ರ್ಯಾಲಿ ಮೂಲಕ ಕೆರಗೋಡು ಗ್ರಾಮಕ್ಕೆ ಯತ್ನಾಳ್ ಕರೆದೊಯ್ಯುವ ಭಜರಂಗ ಸೇನೆ ಸೇರಿ ಹಿಂದೂ ಕಾರ್ಯಕರ್ತರು, 1000ಕ್ಕೂ ಹೆಚ್ಚು ಬೈಕ್ ಹಾಗೂ ಕಾರುಗಳ ಬೃಹತ್ ರ್ಯಾಲಿ ನಡೆಯಲಿದೆ ಎಂದರು. ಹನುಮ ಧ್ವಜ ವಿವಾದ, ಹಾಗೂ ಹಿಂದೂಗಳ ಉದ್ದೇಶಿಸಿ ಮಾತಾಡಲಿದ್ದಾರೆ ಎಂದರು.