ಬಂಗಾರಪೇಟೆ: ಬಿಜೆಪಿ ಬೆಂಬಲಿತರು ಬೆಳಸಿದ ಸಂಸ್ಥೆ ಟಿಎಪಿಸಿಎಂಎಸ್:ನಗರದಲ್ಲಿ
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್
ಅಕ್ಟೋಬರ್ 12 ರಂದು ಭಾನುವಾರ ನಡೆಯಲಿರುವ ಟಿಎಪಿಸಿಎಂಎಸ್ ಆಡಳಿತಮಂಡಳಿಯನ್ನು ವಶಪಡಿಸಿಕೊಳ್ಳಲು ಎನ್‌ಡಿಎ ಅಭ್ಯರ್ಥಿ ಗಳು ದೇವಮೂಲೆಯಾಗಿರುವ ಬೂದಿ ಕೋಟೆ ಗ್ರಾಮದಿಂದ ಪ್ರಚಾರಕಾರ್ಯಕ್ಕೆ ಚಾಲನೆ ನೀಡಿ ಗುರುವಾರ ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ಈ ಹಿಂದೆ ಟಿಎಪಿಸಿಎಂಎಸ್ ಬಿಜೆಪಿ ವಶದಲ್ಲಿದ್ದಾಗ ಸಂಸ್ಥೆ ಬೆಳವಣಿಗೆಗೆ ಅನೇಕ ಕಾರ್ಯ ಕ್ರಮಗಳನ್ನು ರೂಪಿಸಲಾಗಿತ್ತು. ನಷ್ಟದಲ್ಲಿದ್ದ ಸಂಸ್ಥೆಗೆ ಮರು ಜೀವ ನೀಡದ್ದೇ ನಾವು. ನಾವು ಕಟ್ಟಿ ಬೆಳೆಸಿದ ಸಂಸ್ಥೆಯಲ್ಲಿ ನಂತರ ಕಾಂಗ್ರೆಸ್ ಬೆಂಬಲಿಗರು ದರ್ಬಾರು ಮಾಡಿದರು ಎಂದು ಟೀಕಿಸಿದರು.