ಮಳವಳ್ಳಿ: ಪಟ್ಟಣದಲ್ಲಿ ಬಲಗೈ ಮುಖಂಡರ ಸಭೆ, ಜಾತಿ ಕಾಲಂನಲ್ಲಿ ಪರಿಶಿಷ್ಟ ಜಾತಿ, ಉಪ ಜಾತಿಯಲ್ಲಿ ಹೊಲೆಯ, ಧರ್ಮದಲ್ಲಿ ಬೌದ್ಧ ಎಂದು ಬರೆಸಲು ಕರೆ
ಮಳವಳ್ಳಿ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ದಿನಾಂಕ 22. 9 .2025 ರಿಂದ 7. 10.2025 ವರೆಗೆ ನಡೆಸಲು ಉದ್ದೇಶಿಸಿರುವ ಜಾತಿ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿ ಗತಿ ಗಣತಿ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ರಾಜಕೀಯ ಪಕ್ಷ, ವಿವಿಧ ಸಂಘಟನೆಗಳಿಗೆ ಸೇರಿದ ಬಲಗೈ ಸಮುದಾಯದ ಮುಖಂಡರುಗಳು ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಾಯಂಕಾಲ 5.30ರಲ್ಲಿ ಸಭೆ ಸೇರಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಮುಂಬರುವ ದಿನಗಳಲ್ಲಿ ಸಮುದಾಯದ ಮೇಲೆ ಆಗುವಂತಹ ಪರಿಣಾಮಗಳ ಬಗ್ಗೆ ಚರ್ಚಿಸಲಾಯಿತು. ಸೋಮವಾರದಿಂದ ಆರಂಭವಾ ಗುವ ಜನಗಣತಿ ಸಮೀಕ್ಷೆ ಸಂದರ್ಭದಲ್ಲಿ ಜಾತಿ ಕಾಲಂ ನಲ್ಲಿ ಪರಿಶಿಷ್ಟ ಜಾತಿ, ಉಪಜಾತಿ ಕಾಲಂನಲ್ಲಿ ಹೊಲಯ. ಮತ್ತು ಧರ್ಮದ ಕಾಲಂ ನಲ್ಲಿ ಬೌದ್ಧರು. ಎಂದು ಬರೆಸಲು ಕರೆ ನೀಡಲಾಯಿತು.