ಚಿಕ್ಕಬಳ್ಳಾಪುರ: ಇಂಜಿನಿಯರ್ಸ್ ಡೇದಂದು ಲಯನ್ಸ್ ಕ್ಲಬ್ ವತಿಯಿಂದ ಮುದ್ದೇನಹಳ್ಳಿಯಲ್ಲಿ ವಿಶ್ವೇಶ್ವರಯ್ಯ ಸಮಾಧಿಗೆ ಪುಷ್ಪನಮನ
ಇಂದು ಇಂಜಿನಿಯರ್ಸ್ ಡೇ ದಂದು ಚಿಕ್ಕಬಳ್ಳಾಪುರ ಲಯನ್ಸ್ ಕ್ಲಬ್ ವತಿಯಿಂದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಹುಟ್ಟೂರು ಮುದ್ದೇನಹಳ್ಳಿ ಯಲ್ಲಿ ವಿಶ್ವೇಶ್ವರಯ್ಯ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಾಯಿತು.ತದ ನಂತರ ಚಿಕ್ಕಬಳ್ಳಾಪುರದ ಪ್ರಾಧ್ಯಾಪಕ ವರ್ಗದವರಾದ ಶ್ರೀನಿವಾಸ್ ಮೂರ್ತಿ ಅವರಿಗೆ ಇಂಜಿನಿಯರ್ಸ್ ಡೇ ಸರ್ಟಿಫಿಕೇಟ್ ಹಾಗೂ ಶಿಕ್ಷಕರ ವರ್ಗದ ಭಾರತಿ ಶ್ರೀನಿವಾಸ್ ದಂಪತಿ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿ ಸರ್ಟಿಫಿಕೇಟ್ ನೀಡಲಾಯಿತು.